ಪದ್ಯದಿಂದ ಗದ್ಯಕ್ಕೆ

ಹದಿ ಹರೆಯದ ವಯಸು
ತಲೆ ತುಂಬ ಕನಸು
ಎಲ್ಲೆಲ್ಲು ಸೊಗಸು
ಮನಸು
ನವೋದಯದ ಪ್ರೇಮ ಕವನ

ನಲವತ್ತರ ನಡು ಪ್ರಾಯ
ಅಂತರಮುಖತೆ
ಕಾಮುಕತೆ
ಮೈಮನ
ಮಾದರಿ ನವ್ಯಕಾವ್ಯ

ಅರವತ್ತರ ಇಳಿಗಾಲ
ಅನುಭಾವಮೃತದ
ಉದ್ದುದ್ದ ಮಾತು
ಬದುಕು
ಗದ್ಯಕ್ಕೆ ಹೊರಳಿದ ಪದ್ಯ.

ಶ್ರೀಪಾದ ಹೆಗಡೆ
೧೪.೦೨.೨೦೦೯.